Physical Education Assignment 9
ಶ್ರೀ ಬಸವರಾಜ್ ಸರಕಾರಿ ಪ್ರೌಢಶಾಲೆ ಮಾಡಗಿರಿ ತಾಲ್ಲೂಕು ಸಿರವಾರ ಜಿಲ್ಲಾ ರಾಯಚೂರು
ಚಟುವಟಿಕೆ ೦೯
ಸದರಿ ಮನೆಯಿಂದಲೇ ಕೆಲಸದ ಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ ೪೦೦ ಪದಗಳ ಲೇಖನ
ಇಂದು Covid19 ಪ್ರಪಂಚವನ್ನೇ ಬಾಧಿಸುತ್ತಿರುವ ಸಂದರ್ಭದಲ್ಲಿ ಎಲ್ಲ ಶೈಕ್ಷಣಿಕ ಚಟುವಟಿಕೆಗಳು ಮುನ್ನಡೆಸುವುದು ಸವಾಲಾಗಿ ಪರಿಣಮಿಸಿದೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಲು ಈ ಕೆಳಕಂಡ ವಿಧಾನಗಳನ್ನು ಅನುಸರಿಸಬೇಕಾದ ಅನಿವಾರ್ಯತೆ ಇದೆ
>ತಂತ್ರಜ್ಞಾನ ಆಧಾರಿತ ಶಿಕ್ಷಣ ಕಲಿಕೆ =ಈಗಾಗಲೇ ಸಾಕಷ್ಟು ಸಮಯಾವಕಾಶ ದೊರೆತಿರುವುದರಿಂದ ಅಮೂಲ್ಯ ವೇಳೆಯನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ತಂತ್ರಜ್ಞಾನಾಧಾರಿತ ಶಿಕ್ಷಣವನ್ನು ಪಡೆಯುವುದರ ಮೂಲಕ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಬಹುದಾಗಿದೆ.
ಉದಾಹರಣೆ :ಕಂಪ್ಯೂಟರ್ ಮೂಲಭೂತ ಪರಿಕಲ್ಪನೆಗಳ ಕಲಿಕೆ
>ಆನ್ಲೈನ್ ತರಬೇತಿ =ಇಲಾಖೆಯ ವತಿಯಿಂದ ನಡೆಯುವ ಆನ್ಲೈನ್ ತರಬೇತಿಗಳ ಮೂಲಕ ಶಿಕ್ಷಕರು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ
>ಪಾಠೋಪಕರಣಗಳ ತಯಾರಿಕೆ =ಶಾಲೆಯಲ್ಲಿ ಬೋಧನೆಯ ಸಮಯದಲ್ಲಿ ಮಕ್ಕಳಿಗೆ ನೈಜ ಅನುಭವ ನೀಡಲು ಹಲವಾರು ಬೋಧನೋಪಕರಣಗಳನ್ನು ಇಂಥ ರಜಾ ದಿನಗಳಲ್ಲಿ ತಯಾರಿಸಿ ಇಟ್ಟುಕೊಳ್ಳುವುದು ಉತ್ತಮ
>ಸಾಧಕರೊಂದಿಗೆ ಸಂವಾದ =ಜಿಲ್ಲಾ ರಾಜ್ಯ ಹಾಗೂ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹಲವಾರು ಶಿಕ್ಷಕರನ್ನು ಸಂಪರ್ಕಿಸಿ ಅವರು ತಮ್ಮ ಬೋಧನೆಯಲ್ಲಿ ಅಳವಡಿಸಿಕೊಂಡ ಉತ್ತಮ ಅಂಶಗಳನ್ನು ನಮ್ಮ ಬೋಧನೆಯಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ .
Comments
Post a Comment